ವಿಷಯಕ್ಕೆ ಹೋಗು

ದುರ್ಗೆ

ವಿಕಿಪೀಡಿಯರ್ದ್, ಒಂಜಿ ಸೊತಂತ್ರ ವಿಶ್ವಕೋಶ
ದುರ್ಗಾ
ಜಗದಂಬೆ
ಶಕ್ತಿದೇವತೆ
ದುರ್ಗಾದೇವಿ
ಬೇತೇ ಪುದರ್ಲುದುರ್ಗೆ
ಮಹಿಷಾಸುರಮರ್ಧಿನಿ
ಮಾರಿಕಾಂಬಾ
ಭವಾನಿ
ಆದಿಶಕ್ತಿ
ಚಾಮುಂಡೇಶ್ವರಿ
Affiliationಪಾರ್ವತಿ
ಇಪ್ಪುನ ಜಾಗೆಮಣಿದ್ವಿಪ
ಮಂತ್ರಓಂ ಶ್ರೀ ದುರ್ಗಾದೇವಿಯೇ ನಮಃ
ವಾಹನಪಿಲಿ
ಪಟ್ಯೊದೇವಿ ಮಹಾತ್ಮೆ
ಜಾನಪದ
ದೇವಿ ಭಗವತಾ ಪುರಾಣ
ಪರ್ಬನವರಾತ್ರಿ, ವಿಜಯದಶಮಿ, ದುರ್ಗಾಪೂಜೆ,
ವೈಯಕ್ತಿಕ ಇಸಯೊಲು
ಸಂಗಾತಿಶಿವ

ಶ್ರೀ ದುರ್ಗಾ ಪರಮೇಶ್ವರೀ[]

[ಸಂಪೊಲಿಪುಲೆ]
ಶ್ರೀ ದುರ್ಗಾ ಪರಮೇಶ್ವರೀ

ಪರಬ್ರಹ್ಮರೂಪಿಣಿ ಆಯಿನ ಆದಿಪರಾಶಕ್ತಿ ಶಾಕ್ತೇಯರೆ ಪರಬ್ರಹ್ಮ ಶಕ್ತಿದೇವತೆ. ಈ ದೇವಿ ಇಜ್ಜಂದೆ ಮಾತಲಾ ಚೈತನ್ಯಶೂನ್ಯ ಜಡವಾದ್ ಪರಿಣಮಿಸವುಂಡು. ಶ್ರೀಮದ್ದೇವೀ ಭಾಗವತ, ದೇವೀ ಪುರಾಣ, ದೇವಿಮಹಾತ್ಮೆ, ದೇವೀ ಉಪನಿಷತ್ತು, ವೇದ-ಪುರಾಣೇತಿಹಾಸ, ಶೃತಿ-ಸ್ಮೃತಿಕುಲು ದೇವಿನ ಬಗೆತ್ತ, ಅಲೆನ ಶಕ್ತಿದ ಬಗೆತ್ತ ವರ್ಣನೆನ್ ಮಲ್ಪುಂಡು. ಮೋಲೆ ಅಂತಿಮ ಅದ್ವೈತ ಪರಬ್ರಹ್ಮೆ. ಮೋಲೆರ್ದೇ ಹರಿ-ಹರೆ-ಬ್ರಹ್ಮೆರ್ ಪುಟ್ಟುನೆ. ಮೋಲೆರ್ದೇ ಸೃಷ್ಠಿದ ಅಂತ್ಯ. ಸೃಷ್ಠಿದ ಆದಿಡ್ ಉದಯಿಸಯಿನ ಮೋಲೆನ್ ಆದಿಶಕ್ತಿ ಪಂಡ್‌ದ್, ಪರಬ್ರಹ್ಮರೂಪಿಯಾದ್ ಮಾತೆರೆಡಲಾ ಚೈತನ್ಯಕಾರಕಲಾಯಿನ ಕಾರಣ ಪರಾಶಕ್ತಿ ಆದ್ ಉಲ್ಲಲ್.

ಶಕ್ತಿಯಿಲ್ಲದೇ ಎಲ್ಲವೂ ಜಡ. ಪ್ರತಿಯೊಂದು ಕಾರ್ಯ‍ದ ಕಾರಣವೂ ಶಕ್ತಿಯೇ. ಬ್ರಹ್ಮನ ಸೃಷ್ಠಿ, ಹರಿಯ ಪಾಲನೆ, ಹರನ ಸಂಹಾರ ಈ ಶಕ್ತಿಯಿಂದಲೇ ನಡೆಯುವುದು. ಇವಳನ್ನೇ ದುರ್ಗಾ ಎಂದು ಕರೆಯುವುದು. ಇವಳನ್ನೇ ಪರಮೇಶ್ವರೀ ಎಂದು ಪರಶಿವೆ ಎಂದು ಮಹಾಮಾಯಾ, ಆದಿಮಾಯೇ, ಯೋಗಮಾಯೇ, ಯೋಗನಿದ್ರಾ ಎಂದು ಕರೆಯುವುದು. ಉದಾ : ಒಬ್ಬ ವ್ಯಕ್ತಿಗೆ ಏನನ್ನಾದರೂ ಮಾಡಲು ಅಸಾದ್ಯವಾದಾಗ ಅವನನ್ನು ಶಕ್ತಿಹೀನನೆಂದು ಹೇಳುತ್ತಾರೆ. ಅದರ ಬದಲ್ಲಿಗೆ ಬ್ರಹ್ಮಹೀನ, ವಿಷ್ಣುಹೀನ ಅಥವಾ ರುದ್ರಹೀನನೆಂದು ಹೇಳುವುದಿಲ್ಲ. ಇದೇ ಮೂಲಶಕ್ತಿಯ ಸಂಕ್ಷೇಪ ನಿರೂಪಣೆ.

ಇನ್ನು ಶಕ್ತಿದೇವತೆ ತಾಮಸ-ರಾಜಸ-ಸಾತ್ತ್ವಿಕ ಎಂಬ ಮೂರು ರೂಪದಲ್ಲಿ ಕಂಗೊಳಿಸುತ್ತಾಳೆ. ಹಿಂದೆ ಸೃಷ್ಠಿಯ ಪ್ರಾರಂಭದಲ್ಲಿ ಪರಾಶಕ್ತಿ ಹರಿ-ಹರ-ಬ್ರಹ್ಮರನ್ನು ಸೃಷ್ಠಿಸಿ ಸೃಷ್ಠಿ-ಸ್ಥಿತಿ-ಲಯ ಕಾರ್ಯದಲ್ಲಿ  ನೇಮಿಸುತ್ತಾಳೆ. ಮುಂದೇ ಮಹಾವಿಷ್ಣು ಬೃಗುನಂದನೇ ಮಹಾಲಕ್ಷ್ಮೀಯನ್ನು, ಬ್ರಹ್ಮನು ಸುತೆ ಸರಸ್ವತಿಯನ್ನು ವಿವಾಹವಾಗುತ್ತಾನೆ. ಶಿವನು ವಿರಾಗಿಯಾಗಿ ಉಳಿದು ಬಿಡುತ್ತಾನೆ. ಇದನ್ನು ಕಂಡು ಹರಿ-ಬ್ರಹ್ಮರು ಪರಾಶಕ್ತಿಯನ್ನು ಕುರಿತು ಪ್ರಾರ್ಥಿಸಿದಾಗ ಮುಂದೆ ನಾನೇ ಜನಿಸಿ ಶಿವನನ್ನು ವರಿಸುವೆನೆಂದು ವರವಿಯುತ್ತಾಳೆ. ಮಾತ್ರವಲ್ಲದೆ ಶ್ರೀಹರಿಯಲ್ಲಿ ಮುಂದೆ ನಾನು ಜನಿಸಿದಾಗ ನಾನು ಅಗ್ನಿಯಲ್ಲಿ ಆಹುತಿಯಾಗುವ ಸಂದರ್ಭ ಬರುತ್ತದೆ. ಆ ಸಮಯದಲ್ಲಿ ನೀನು ಶಿವನ ಶಿರದಮೇಲಿನ ನನ್ನ ಶರೀರವನ್ನು ಈ ಸುದರ್ಶನದಿಂದ ತುಂಡರಿಸಿಬಿಡು ಎಂದು ಆಜ್ಞೆ ಮಾಡುತ್ತಾಳೆ. ಆದಿಮಾಯೇಯ ಜನ್ಮವನ್ನು ಅರಿತ ಬ್ರಹ್ಮದೇವರು ದಕ್ಷಾಪ್ರಜಾಪತಿಗೆ ಪರಾಶಕ್ತಿಯನ್ನು ಕುರಿತು ತಪಸ್ಸು ಮಾಡಿ ಮಗಳಾಗಿ ಪಡೆಯುವಂತೆ ಆಜ್ಞೆ ಮಾಡುತ್ತಾರೆ. ಇದರಿಂದ ದಕ್ಷಪ್ರಜಾಪತಿ ಪರಾಶಕ್ತಿಯನ್ನು ತಪಸ್ಸಿನಿಂದ ಒಲಿಸಿಕೊಂಡು ಪರಾಶಕ್ತಿಯನ್ನು ತನ್ನ ಸುತೆ ದಾಕ್ಷಾಯಿಣಿಯ ರೂಪದಲ್ಲಿ ಪಡೆಯುತ್ತಾನೆ. ಆದರೇ ದೇವಿಯ ವರದಂತೆ ಮುಂದೆ ಎಂದಾದರೂ ನನ್ನ (ದೇವಿಯ) ಅನಾದಾರವಾದಾಗ ನಿನ್ನನ್ನು ತ್ಯಜಿಸಿ ನಭದಲ್ಲಿ ಅದೃಶ್ಯಳಾಗುವೆ ಎಂಬ ವಾಣಿಯನ್ನು ನೀಡಿದ್ದಳಂತೆ.

ದಾಕ್ಷಾಯಿಣಿ ಜನ್ಮವಾಗಿರುವುದೇ ಶಿವನಿಗಾಗಿ. ಆದರೇ ದಕ್ಷನು ಕಾಲಕಳೆದಂತೆ ಶಿವ ದ್ವೇಷಿಯಾದ. ಇದಕ್ಕೂ ಕಾರಣವಿದೆ. ಹಿಂದೆ ದೂರ್ವಾಸರು ಶಿವಪೂಜೆಯನ್ನು ಮಾಡಿ ಶಿವನಿಗೆ ಆಭೂಷಿತವಾದ ಕೊರಳ ಹಾರವನ್ನು ಮಾರ್ಗಮದ್ಯದಲ್ಲಿ ಹಾದುಹೋಗುವಾಗ ದಕ್ಷನನ್ನು ಕಂಡು ಪ್ರೀತಿಯಿಂದ ಈ ಶಿವ ಪ್ರಸಾದವನ್ನು ಸ್ವೀಕರಿಸು ಎಂದು ಅವನಿಗೆ ನೀಡಿದರು. ಅದನ್ನು ದಕ್ಷನು ಮರೆತು ತನ್ನ ವಿಲಾಸಮಂಚದಲ್ಲಿ ಇಟ್ಟುಬಿಟ್ಟನಂತೆ. ಇದರ ದೋಷದಿಂದ ದಕ್ಷನಲ್ಲಿ ಮನೋವಿಕಾರ ಉಂಟಾಗಿ ಶಿವದ್ವೇಷಿಯಾದ. ಇದರ ನಂತರ ತ್ರಿಮೂರ್ತಿಗಳ ಸಭೆಯಲ್ಲಿ ಶಿವನು ತನಗೆ ಎದ್ದು ನಿಂತು ಗೌರವ ನೀಡಲಿಲ್ಲ ಎಂಬ ಅಹಂಕಾರದಿಂದ ದ್ವೇಷವನ್ನು ಇನ್ನೂ ಹೆಚ್ಚಾಗಿಸಿಕೊಂಡ. ಇದನ್ನೇ ಅವಿದ್ಯೆ ಎನ್ನುವುದು.

ಪರಶಿವೆಯ ಸಂಕಲ್ಪದಂತೆ ಮುಂದೆ ಶಿವನನ್ನು ದಾಕ್ಷಾಯಿಣಿ ವರಿಸಿಯೇ ಬಿಡುತ್ತಾಳೆ. ಇದರಿಂದ ದಕ್ಷನು ಕುಪಿತಗೊಳ್ಳುತ್ತಾನೆ. ಹಿಂದೆ ಪರಾಶಕ್ತಿಯಾಡಿದ ಮಾತುಗಳೆಲ್ಲವನ್ನು ಅಹಂಕಾರಯುತನಾಗಿ ತಳ್ಳಿಹಾಕಿದ ದಕ್ಷ ತನ್ನ ಅಂತ್ಯವನ್ನು ತಾನೇ ಮಾಡಿಕೊಳ್ಳುವ ದಾರಿಯನ್ನು ಕಂಡುಕೊಂಡ. ಶಿವನಿಲ್ಲ ಪೂಜೆಯನ್ನು ಆಯೋಜಿಸಿ ಶಿವನಿಂದನೆ ಮಾಡುವುದರ ಜೊತೆಗೆ ಪರಾಶಕ್ತಿಯ ನಿಂದನೆ ಮಾಡಿ ತನ್ನ ಮಾತನ್ನು ಮುರಿದು ಶಿವೆ ನಭದಲ್ಲಿ ಲೀನವಾಗಿ ದಾಕ್ಷಾಯಿಣಿಯ ಛಾಯೆ ಅಗ್ನಿಯಲ್ಲಿ ಬೆರೆತು ಮಹಾಸತೀಯಾಗಿ ಮೆರೆಯುತ್ತಾಳೆ. ಶಿವ ಸುತ ವೀರಭದ್ರ ಮದೋನ್ಮತ್ತನಾದ ದಕ್ಷನ ರುಂಡವನ್ನು ಕಡಿದು ಅಗ್ನಿಯಲ್ಲಿ ಸುಟ್ಟು ಅಹಂಕಾರವನ್ನು ಅಳಿಸಿ ಬಿಡುತ್ತಾನೆ. ಶಿವನು ದಾಕ್ಷಾಯಿಣಿಯ ದೇಹವನ್ನು ಶಿರದ ಮೇಲೆ ಹೊತ್ತು ತಾಂಡವ ಆಡುವ ಸಂದರ್ಭದಲ್ಲಿ ದೇವಿ ಮೊದಲೇ ತಿಳಿಸಿದಂತೆ ಶ್ರೀಹರಿ ದಾಕ್ಷಾಯಣಿಯ ದೇಹವನ್ನು ಸುದರ್ಶನದಿಂದ ತುಂಡರಿಸಿ ಬಿಡುತ್ತಾನೆ. ಪರಾಶಕ್ತಿಯ ದೇಹದ ಅಂಗಾಂಗಳು ಬಿದ್ದ ಸ್ಥಳಗಳೇ ಮುಂದೆ ಪ್ರಥ್ವಿಯಲ್ಲಿ 108 ಶಕ್ತಿಪೀಠ ಎಂದು ಪ್ರಸಿದ್ಧಿಯನ್ನು ಪಡೆಯುತ್ತದೆ.

ಮುಂದೇ ಶಿವನು ಸತೀ ವಿಹೀನನಾಗಿ ಕಾಮಾಖ್ಯ ಶಕ್ತಿಪೀಠದಲ್ಲಿ ದೇವಿಯನ್ನು ಕುರಿತು ತಪಸ್ಸು ಮಾಡಿ ಪುನಃ ಪರಾಶಕ್ತಿಯನ್ನು ಪಾರ್ವತೀ ರೂಪದಲ್ಲಿ ಪಡೆಯುತ್ತಾನೆ. ಪರಾಶಕ್ತಿ ದುರ್ಗೆಯೇ ಪುನಃ ಪರ್ವತರಾಜ ಹಿಮವಂತ ಮತ್ತು ಮೇನೆಯ ಗರ್ಭದಲ್ಲಿ ಅಂಶ (ಗಂಗಾ) ಮತ್ತು ಪೂರ್ಣಾಂಶಳಾಗಿ (ಪಾರ್ವತಿ) ಅವತಾರ ಮಾಡುತ್ತಾಳೆ. ಪುನರಪಿ ಪಾರ್ವತೀ ಶಕ್ತಿಗೆ ಶಕ್ತಿದೇವತೆಯಾಗಿ ಜಗತ್ತಿನಲ್ಲಿ ಜಗನ್ಮಾತೆಯಾಗಿ ಕಂಗೊಳಿಸುತ್ತಾಳೆ. ಪರಾಶಕ್ತಿಯ ತಾಮಸ-ರಾಜಸ-ಸಾತ್ತ್ವೀಕ ರೂಪಗಳೇ ಮಹಾಕಾಳಿ-ಮಹಾಲಕ್ಷ್ಮೀ-ಮಹಾಸರಸ್ವತಿ. ಯುದ್ದೋನ್ಮಾಧಿನಿ ಶಿವೆಯಾದ ದುರ್ಗೆ ಶಕ್ತಿದೇವತೆಯಾದರೆ, ಸರ್ವಸಂಪದವನ್ನು ನೀಡಿ ಸುಖ-ಶಾಂತಿಯನ್ನು ನೆಮ್ಮದಿಯನ್ನು ಕರುಣಿಸುವುದು ವಿಷ್ಣುಪ್ರಿಯೆ ಮಹಾಲಕ್ಷ್ಮೀ, ಇನ್ನು ಅವಿದ್ಯೆ ನಾಶಮಾಡಿ ಪರಮ ಜ್ಞಾನ ನೀಡುವವಳು ಆದಿವಿದ್ಯಾ ಸರಸ್ವತೀ.

ಪರಾಶಕ್ತಿ ದೇವಿ ತನ್ನ ಮೊದಲ ಅವತಾರದಲ್ಲಿ ವಿಷ್ಣುವಿನ ಯೋಗಮಾಯೇಯಾಗಿ ಮುಂದೆ ಮಧು-ಕೈಟಭರ ವಧೆ ಮಾಡಿಸುತ್ತಾಳೆ. ಮುಂದೆ ಚಂಡ-ಮುಂಡ, ಮಹಿಷಾಸುರ, ಶುಂಭ-ನಿಶುಂಭ, ಬಿಡಾಲ ಇನ್ನಿತ್ಯಾದಿ ರಾಕ್ಷಸರನ್ನು ಕೊಂದು ದುರ್ಗತಿನಾಶಿನಿ ದುರ್ಗಾ ಎಂಬ ನಾಮ ವಿಶೇಷಣದಿಂದ ಪರಾಶಕ್ತಿ ಪಾರ್ವತಿ ಪ್ರಸಿದ್ಧಳಾಗುತ್ತಾಳೆ. ಮುಂದೆ ಶ್ರೀಹರಿಯ ಸಹೋದರಿಯಾಗಿ ನಂದನ ಮನೆಯಲ್ಲಿ ಯೋಗಮಾಯೇಯಾಗಿ ಅವರಾತ ತಾಳುತ್ತಾಳೆ. ದುರ್ಗೆ ತನ್ನ ಸಂಕರ್ಷಣ ಶಕ್ತಿಯಿಂದ ದೇವಕಿಯ ಗರ್ಭವನ್ನು ರೋಹಿಣಿಯಲ್ಲಿ ಸನ್ನಿಹಿತಗೊಳಿಸುತ್ತಾಳೆ. ನಂತರ ರಕ್ತದಂತ ಎಂಬ ಅವತಾರ ತಾಳಿ ರಕ್ತದಂತಾಸುರ ವಧೆ ಮಾಡುತ್ತಾಳೆ. ಮುಂದೇ ಕ್ಷೇಮವರ್ಧಿನಿ ಎಂಬ ಹೆಸರಿನಿಂದ ಬರಗಾಲವನ್ನು ನೀಗಿ ಅನ್ನಪೂರ್ಣಾಂಬಿಕೆಯಾಗುತ್ತಾಳೆ. ನಂತರ ದುರ್ಗಾಸುರನೆಂಬ ದುರುಳನ್ನು ಸಂಹರಿಸಿ ಪುನಃ ದುರ್ಗಾಪರಮೇಶ್ವರೀ ಎಂಬ ದಿವ್ಯನಾಮವನ್ನು ಧಾರಣೆ ಮಾಡುತ್ತಾಳೆ. ಬರಗಾಲ ಸಂದರ್ಭದಲ್ಲಿ ಇವಳೇ ಶಾಕಾಂಭರಿ ಅಥವಾ ಬನಶಂಕರಿ (ವನದುರ್ಗಾ) ಎಂಬ ವಿಶೇಷಣದಿಂದ ಪ್ರಸಿದ್ಧಳಾಗುತ್ತಾಳೆ. ಅರುಣಾಸುರನೆಂಬ ದಾನವನನ್ನು ಭ್ರಾಮರಿ ರೂಪದಿಂದ ಕೊಂದು ಭ್ರಮರಾಂಬಿಕೆಯೆಂಬ ನಾಮದಿಂದ ಶ್ರೀಶೈಲದಲ್ಲಿ ನೆಲೆಸುತ್ತಾಳೆ. ಇನ್ನು ದುರ್ಗತಿನಾಶಿನಿ ದುರ್ಗೆಯ ಬಗ್ಗೆ ವಿರ್ಣಿಸುತ್ತಾ ಹೋದರೆ ಯುಗಗಳೇ ಸಾಲದು.

ಇಂಥಹ ತ್ರಿಗುಣಾತ್ಮಿಕೆಯಾದ ಪರಾಶಕ್ತಿ ಪಾರ್ವತಿಯನ್ನು ದುರ್ಗೆಯೆಂದು, ರಾಜರಾಜೇಶ್ವರೀ, ಭುವನೇಶ್ವರೀ ಎಂದು ಕೊಂಡಾಡಿ ಭಜಿಸಿ, ಶಕ್ತಿದೇವತೆಯಾಗಿ ನಾಡಿನೆಲ್ಲೆಡೆ ಆರಾಧಿಸುವ ಸಂಪ್ರದಾಯ ಬೆಳೆದು ಬಂದಿತು. ದುರ್ಗೆ ಶಾಕ್ತರಿಗೂ, ಶೈವರಿಗೂ, ವೈಷ್ಠವರಿಗೂ ಅತ್ಯಂತ ಪ್ರಿಯಳು. ಇವಳೇ ವಿಸ್ತ್ರತವಾಗಿ ಶಕ್ತಿದುರ್ಗೆ, ಶಿವದುರ್ಗೆ, ವಿಷ್ಣುದುರ್ಗೆ ಎಂಬಿತ್ಯಾದಿ ಮತಭೇದಗಳಿಂದ ಗುರುತಿಸಲ್ಪಟ್ಟು ಜಗತ್ತಿನೆಲ್ಲೆಡೆ ಆರಾಧನೆಗೊಳ್ಳುವ ಮಾತೃರೂಪಿಣಿಯಾಗಿದ್ದಾಳೆ. ನಮ್ಮ ನಾಡ ದೇವತೆ ಚಾಮುಂಡೇಶ್ವರಿಯೂ ಮಹಿಷಮರ್ದಿನಿಯಾದ ದುರ್ಗೆ. ಇವಳು ವಿಶ್ವವಿಖ್ಯಾತಿ. ಇನ್ನು ಕನ್ನಡ ನಾಡಿನ ಅಧಿದೇವತೆ ಭುವನೇಶ್ವರಿಯೂ ಪಾರ್ವತಿಯ ರೂಪಗಳೇ.

ಇನ್ನು ಕೊಲ್ಲೂರು ಮೂಕಾಂಬಿಕಾ, ಕೇರಳ ಚೊಟ್ಟಾನಿಕ್ಕರ ಭಗವತಿ, ಗುಹಾವಾಟಿಯ ಕಾಮಾಖ್ಯ, ಮೈಸೂರು ಚಾಮುಂಡಿ, ಶ್ರೀಶೈಲ ಭ್ರಮರಾಂಬಿಕಾ, ಮಲ್ಲ ನಿವಾಸಿನಿ ಶ್ರೀ ದುರ್ಗಾಪರಮೇಶ್ವರೀ, ಕಟೀಲು ಶ್ರೀ ದುರ್ಗಾಪರಮೇಶ್ವರೀ, ಕಂಚಿಯ ಕಾಮಾಕ್ಷಿ, ಮದುರೆಯ ಮೀನಾಕ್ಷಿ ಇವೆಲ್ಲವೂ ಪರಾಶಕ್ತಿ ದುರ್ಗೆಯ ಶಕ್ತಿಪೀಠದ ಮಹತ್ವ ಹೊಂದಿರುವ ಮಹಾಕ್ಷೇತ್ರಗಳು.

ಉಲ್ಲೇಕ

[ಸಂಪೊಲಿಪುಲೆ]
  1. 1. ಶ್ರೀದೇವಿ ಪುರಾಣ 2. ಶ್ರೀ ಮದ್ದೇವೀ ಭಾಗವತ ಮಹಾಪುರಾಣ 3. ಶ್ರೀದೇವಿ ಮಹಾತ್ಮೆ 4. ಕಾಳಿಕಾ ಪುರಾಂ
  1. https://kannada.boldsky.com/inspiration/short-story/durga-puja-origin-history-13029-13029.html
  2. https://sanskritdocuments.org/kannada/durga
  3. https://www.britannica.com/topic/Durga-Puja
"https://tcy.wikipedia.org/w/index.php?title=ದುರ್ಗೆ&oldid=197405"ಡ್ದ್ ದೆತ್ತೊಂದುಂಡು